ದೇವಸ್ಥಾನದ ಬದಿಯಲ್ಲಿಯೇ ಸ್ವಲ್ಪ ಮುಂದೆ ನಡೆದು ಕೊಂಡು ಹೋದರೆ ಅಲ್ಲಿಯೇ ಗುಹೆ ಕಾಣಿಸುತ್ತದೆ. ಈ ಗುಹೆಯಲ್ಲಿ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ್ದಾರೆ ಎಂದು ಬಲ್ಲ ಮೂಲಗಳು ಹೇಳುತ್ತವೆ.
ಆದಿಗುರು ಶಂಕರಾಚಾರ್ಯರ ಭಕ್ತರಾದ ಅವರು ತೋರಿದ ಸನ್ಮಾರ್ಗದಲ್ಲಿಯೇ ನಡೆಯುತ್ತಿರುವ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು
ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಗೋ ಸಂರಕ್ಷಣೆ ಮಾರ್ಗವು ಊರಿನ ಜನರ ಉಸಿರಲ್ಲಿ ಬೆರೆತಿದೆ ಎನ್ನುವುದು ಹೆಮ್ಮೆಯ ವಿಷಯ.
ಅತ್ಯಂತ ಖುಷಿಯಿಂದ ದೇವಿಮನೆಯ ರಥೋತ್ಸವವು ಊರ ಹಬ್ಬದಂತೆ ನೆರವೇರುತ್ತದೆ.
ಬೇಣಂದೂರಿನ ದುರ್ಗಾ ಪರಮೇಶ್ವರಿ ದೇವಿಯು ಉದ್ಭವ ಮೂರ್ತಿ ಎಂದು ಪ್ರತೀತಿಯಿದೆ. ಈ ಸ್ಥಳ ಪ್ರಶಾಂತವಾಗಿಯೂ ಮನಸ್ಸಿಗೆ ನೆಮ್ಮದಿ ತರುವ ಸ್ಥಳವೇನೋ ಎಂಬಂತೆ ಭಾಸವಾಗುತ್ತದೆ.